ಭಟ್ಕಳ, ಅಕ್ಟೋಬರ್ ೨೨: ಕರ್ನಾಟಕ ಕರಾವಳಿ ತೀರದಲ್ಲಿ ವಿಧ್ವಂಸಕ ಕೃತ್ಯವನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಕರಾವಳಿ ಕಾವಲು ಪಡೆ ಮುಂದಾಗಿದ್ದು, ಕರಾವಳಿ ರಕ್ಷಣಾ ಪಡೆಯವರೊಂದಿಗೆ ಸೇರಿಕೊಂಡು ಬುಧವಾರ ಭಟ್ಕಳದಲ್ಲಿಯೂ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಕಳೆದೆರಡು ದಿನಗಳಿಂದ ಮಂಗಳೂರು ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಾರ್ಯಾಚರಣೆ ಚಾಲ್ತಿಯಲ್ಲಿದ್ದು, ಭಟ್ಕಳ ತೀರ ಪ್ರದೇಶಗಳಾದ ಮುಂಡಳ್ಳಿ-ನಸ್ತಾರ, ಗೊರಟೆ, ಬೆಳಕೆ, ತೆಂಗಿನಗುಂಡಿ, ಮುರುಡೇಶ್ವರದಲ್ಲಿ ಕಾವಲು ಪಡೆಯ ಸಿಬ್ಬಂದಿಗಳು ಗಸ್ತು ನಡೆಸಿದರು. ಬುಧವಾರ ಸಂಜೆ ನೇತ್ರಾಣಿ ಗುಡ್ಡದ ಸುತ್ತಮುತ್ತ ಕಾವಲು ಪಡೆಯ ಸಿಬ್ಬಂದಿಗಳು ಬೀಡು ಬಿಟ್ಟಿದ್ದು, ಜನರಲ್ಲಿ ಕುತೂಹಲವನ್ನು ಕರಳಿಸಿದೆ. ಇದೊಂದು ಅಣುಕು ಕಾರ್ಯಾಚರಣೆ ಎಂದು ಹೇಳಲಾಗುತ್ತಿದ್ದು, ಗುರುವಾರ ಸಂಜೆಯ ನಂತರ ಕಾರ್ಯಾಚರಣೆಯ ಕುರಿತಂತೆ ಮಾಹಿತಿ ನೀಡುವುದಾಗಿ ಕರಾವಳಿ ಕಾವಲು ಪಡೆಯ ಹಿರಿಯ ಅಧಿಕಾರಿಗಳು ಮುಂಜಾವಿಗೆ ತಿಳಿಸಿದ್ದಾರೆ.